• waytochurch.com logo
Song # 9243

yesuve naanu ninnannu hudukalilla



ಯೇಸುವೆ ನಾನು ನಿನ್ನನು ಹುಡುಕಲಿಲ್ಲ ,
ನೀನು ನನ್ನನು ಹುಡುಕಿ ಬಂದೆ (೨),
ಈ ಗತಿಸುವ ಲೋಕದ ಬಾಳಿನಲಿ,
ನಿನ್ನ ನೆನೆಯದೆ ನಾನು ನಲಿಯುತ್ತಿದ್ದೆ (೨),
ನನ್ನ ಮರೆಯದೆ ನೀನು ಹುಡುಕುತ್ತ ಬಂದು,
ಹೃದಯದ ಬಾಗಿಲ ತಟ್ಟುತ್ತಲ್ಲಿದ್ದೆ (೨),
||ಯೇಸುವೆ||
ನಾನು ತಾಯಿಯ ಗರ್ಭದಲ್ಲಿ ಇರುವಾಗಲೆ,
ನನ್ನ ರೂಪಿಸಿದ ದೇವರು ನೀನಲ್ಲವೇ (೨),
ನಿನ್ನ ಅಂಗೈಯಲ್ಲಿ ನನ್ನನ್ನು ಚಿತ್ರಿಸಿರುವೆ,
ಆ ಮಮತೆಯ ಮರೆತು ನಾ ಬಾಳಿದೆ (೨),
||ಯೇಸುವೆ||
ಮನ ಮರಗುವ ದೇವರು ನೀನಲ್ಲವೆ,
ನಿನ್ನ ಮಮತೆಯ ಹಗ್ಗದಿಂದ ಕಟ್ಟಿರುವೆ (೨),
ಬೆಟ್ಟ ಗುಡ್ಡಗಳು ಸ್ಥಳವನ್ನು ಬಿಟ್ಟು ಹೋದರೂ,
ನಿನ್ನ ಕೃಪೆಯು ನನ್ನನ್ನು ಬಿಟ್ಟು ಹೋಗದು (೨),
||ಯೇಸುವೆ||


                                
Posted on
  • Song
  • Name :
  • E-mail :
  • Song No

© 2023 Waytochurch.com