namagagi alla kartane ನಮಗಾಗಿ ಅಲ್ಲ ಕರ್ತನೆ
ನಮಗಾಗಿ ಅಲ್ಲ ಕರ್ತನೆ ನಮಗಾಗಿ ಅಲ್ಲ ||
ನಿನ್ನ ಕೃಪೆಗೆ ನಿನ್ನ ಮಹಿಮೆಗೆ
ನಿನ್ನ ನಾಮಕ್ಕೆ ಮಹಿಮೆ ||
1.ದೇವರೆ ನೀನು ಪರಲೋಕದಲ್ಲಿ
ವಾಸಮಾಡುವೆ ||
ನಿನ್ನ ಸಭೆಗಳಿಗಾಗಿ ಲೋಕದಲ್ಲಿ
ಇಳಿದು ಬರುವಾತನೆ ||
2.ಜೀವಿಸದ ದೇವರನ್ನು ಸೃಷ್ಠಿಸಿ ಪೂಜಿಸುವಾ
ಜನರು ನಾಚಿಕೆ ಹೊಂದುವರು ||
ಯೇಸು ಎಂದೆಂದಿಗೂ ಜೀವಿಸುವಾ ದೇವರು
ಆಳ್ವಿಕೆ ನಡೆಸುವೆ ನೀ ||
3.ನಿನ್ನ ದಾಸರನ್ನು ಉನ್ನತದಲ್ಲಿಡುವೆ
ನಿನಗೆ ಘನ ಮಹಿಮೆ ||
ನಿನ್ನ ವಾಕ್ಯಕ್ಕೆ ಭಯಪಡುವವರು
ಭಾಗ್ಯವಂತರಾಗುವರು ||