stutiya vastra dharisi ಸ್ತುತಿಯ ವಸ್ತ್ರ ಧರಿಸಿ
ಸ್ತುತಿಯ ವಸ್ತ್ರ ಧರಿಸಿ ದುಃಖವೆಲ್ಲಾ ಮರೆತು
ಸ್ತುತಿಸಿ ಹರ್ಷಿಸುವಾ ನಮ್ಮ
ಕರ್ತನಲ್ಲಿ ಹರ್ಷಿಸುವಾ ||
1)ಈ ದಿನ ಕರ್ತನಾದಿನ
ಇದರಲ್ಲಿ ನಲಿದಾಡುವಾ ||
ದುಃಖವಿಲ್ಲ ಇನ್ನೂ ಶೋಕವಿಲ್ಲ
ನಾವು ತಿನ್ನುತ್ತ ಕೊಡುತ್ತ ಕೊಂಡಾಡುವಾ ||
| ಸ್ತುತಿಸಿ ಸ್ತುತಿಸಿ ಹರ್ಷಿಸುವ
ಶೋಕ ದುಃಖವ ಮರೆಯುವ |ಸ್ತುತಿಯ |
2)ಕರ್ತನಲ್ಲಿ ಇರೋ ಆನಂದವೆ
ಎಂದೆಂದೂ ನಮ್ಮ ಬಲ ||
ಎಷ್ಟೆಷ್ಟೋ ನೆರವು ನೀಡಿರುವ ಇಂದು
ಹಾಡಿ ಹೊಗಳಿ ಕೊಂಡಾಡುವ ||
3)ದುಃಖಕ್ಕೆ ಪ್ರತಿ ಆನಂದವೆ
ಎಂದು ಆನಂದ ಆನಂದವೆ ||
ಜಜ್ಜಲ್ಪಟ್ಟ ಮನವು ಓಡಿಹೋಗಿ ಇಂದು
ಉತ್ಸಾಹ ಆತ್ಮ ಬಂದಿದೆ ||