karua nidhiye karuisu ಕರುಣ ನಿಧಿಯೇ ಕರುಣಿಸು ṇ ṇ
ಕರುಣ ನಿಧಿಯೇ ಕರುಣಿಸು ಮುಂಜಾನೇ ವೇಳೆಯಲ್ಲಿ
ಕರುಣಿಸು
ಪ್ರಸನ್ನತೆಯಿಂದ ದಯೆತೋರಿಸು || 2 ||
|| ಕರುಣ ನಿಧಿಯೇ ||
ನಿನ್ನ ಕೃಪೆಯೊಂದೆ ಸಾಕು
ದಿನವೆಲ್ಲಾ ಬದುಕಲು ಯೇಸಯ್ಯಾ || 2 ||
ನಿನ್ನ ಮಮತೆಯೊಂದೇ ಸಾಕು
ದಿನವೆಲ್ಲಾ ಸ್ತುತಿಸಲು ಯೇಸಯ್ಯಾ || 2 ||
|| ಕರುಣ ನಿಧಿಯೇ ||
ನನ್ನ ಕೈಗಳ ಎತ್ತಿವೆ
ಮೊಣಕಾಲು ಊರುವೆ ಯೇಸಯ್ಯಾ || 2 ||
ನಿನ್ನ ಪಾದವ ಬಿಡೆನು
ಸದುತ್ತರ ನೀಡು ಯೇಸಯ್ಯಾ || 2 ||
|| ಕರುಣ ನಿಧಿಯೇ ||
ಪೌಳಿಯ ಒಡಕಿನಲ್ಲಿ ನಿಂತು
ದೇಶಕ್ಕಾಗಿ ಪ್ರಾರ್ಥಿಸುವೆ ಯೇಸಯ್ಯಾ || 2 ||
ಉಜ್ಜೀವನ ಮಳೆಯು ಸುರಿಸು
ದೇಶವನ್ನು ರಕ್ಷಿಸಲು ಯೇಸಯ್ಯಾ || 2 ||
|| ಕರುಣ ನಿಧಿಯೇ ||