unnatha devane parishudha devane ಉನ್ನತ ದೇವನೆ ಪರಿಶುದ್ಧ ದೇವನೆ
ಉನ್ನತ ದೇವನೆ ಪರಿಶುದ್ಧ ದೇವನೆ
ನನ್ನ ಮೊರೆಯ ನೀ ಲಾಲಿಸು ||2|
ನಿನ್ನನೆ ಪ್ರಾರ್ಥಿಸುವೆ ಎಡೆಬಿಡದೇ ಕೀರ್ತಿಸುವೆ
ನನ್ನ ಸ್ವರವ ನೀ ಆಲಿಸು ||2||
ಪ್ರಾರ್ಥಿಸವೇ ವಿಜ್ಞಾಪಿಸುವೇ ನಮ್ಮ ಭಾರತವ ನೀ ರಕ್ಷಿಸು
(ಓ ಯೇಸುವೆ)
ಪ್ರಾರ್ಥಿಸುವೆ ವಿಜ್ಞಾಪಿಸುವೇ ನಮ್ಮ ದೇಶವ
ನೀ ರಕ್ಷಿಸು.
1.ಸಮಸ್ತ ಭೂಮಿಯು ನಿನ್ನ ಕೈಯಲ್ಲಿದೆ.
ನೀನೆ ರಾಜನು ನೀನೆ ಆಳುವಾತನು ||2||
ನನ್ನ ಕಷ್ಟದ ವೇಳೆಯಲ್ಲಿ ಬಿಡಿಸಿ ಕಾದಂತೆ
ನನ್ನ ದೇಶವ ಹಾಗೆ ನೀ ರಕ್ಷಿಸು.
2.ರಾಜನ ಹೃದಯವು ನಿನ್ನ ಕೈಯಲ್ಲಿದೆ
ನೀರಿನ ಕಾಲುವೆಯಂತೆ ನೀ ಮಾರ್ಪಡಿಸುವೆ ||2||
ವೈರಿಗಳಿಂದ ನನ್ನ ಬಿಡಿಸಿ ಕಾದಂತೆ
ನನ್ನ ದೇಶವ ಹಾಗೆ ನೀ ರಕ್ಷಿಸು.