ಮೊಣಕಾಲೂರಿ ನಿನ್ನನ್ನರಾಧಿಸುವೆ
ಆರಾಧನೆ ಸುಂದರವಾದ ಅನುಭವ. ಪ್ರತಿ ಕ್ಷಣ, ಪ್ರತಿ ಸಮಯದಲ್ಲೂ ಪೂರ್ಣ ಮನಸ್ಸಿನಿಂದ ಆರಾಧಿಸುವಾಗ, ಯಹೋವನ ಅದ್ಭುತ ಕಾರ್ಯಗಳನ್ನು
ನೆನೆಪಿಸಿ, ಕೃತಜ್ಞತೆಯನ್ನು ಸಲ್ಲಿಸುತ್ತ ಆತನ ಎಲ್ಲ ಉಪಕಾರಗಳನ್ನು ಸ್ಮರಿಸುತ್ತ, ಸ್ತುತಿ ಸ್ತೋತ್ರ ಸಲ್ಲಿಸೋಣ.
ಈ ಆರಾಧನೆ ಗೀತೆಯು ತುಂಬಾ ಮನ ಮುಟ್ಟುವಂತಹದ್ದು.
ಇದನ್ನು Reprised ಅಥವಾ ಈ ಹಾಡಿನ ರಾಗವನ್ನು ಬದಲಾಯಿಸಿ, ಇನ್ನೂ ಸುಮಧುರ, ಭಕ್ತಿಯಿಂದ ಆರಾಧನೆ ಸಲ್ಲಿಸುವಂತಹ ರಾಗಗಳನ್ನು ಸೇರಿಸಲಾಗಿದೆ.
ನಿಮ್ಮ ಪ್ರಾರ್ಥನೆ ಸಮಯ ಅತೀ ಮಧುರವಾಗಿರಲಿ ಎಂದು ಹಾರೈಸುತ್ತ, ಈ ಹಾಡನ್ನು ಅರ್ಪಿಸುತ್ತಿದ್ದೇನೆ.
ಮೊಣಕಾಲೂರಿ ನಾ, ನಿನ್ನನ್ನಾರಾಧಿಸುವೆ,
ಕೈಗಳನ್ನೆತ್ತಿ, ನಾ ನಿನ್ನನೇ ಸ್ತುತಿಸುವೆ,
ಮೊಣಕಾಲೂರಿ ನಾ, ನಿನ್ನನ್ನಾರಾಧಿಸುವೆ
ಕೈಗಳನ್ನೆತ್ತಿ, ನಾ ನಿನ್ನನೇ ಸ್ತುತಿಸುವೆ,
ಎಂದೆಂದಿಗೂ ನೀನೆ, ಸಿಂಹಾಸನಾಸೀನಾ
ನನ್ನ ಹೃದಯದಿಂದ, ಆರಾಧಿಸುವೆ,
ಎಂದೆಂದಿಗೂ ನೀನೆ, ಸಿಂಹಾಸನಾಸೀನಾ,
ನನ್ನ ಹೃದಯದಿಂದ, ಆರಾಧಿಸುವೆ,
ನಿನ್ನ ಗಾಯಗಳ, ದೃಷ್ಟಿಸಿ ನಾ ನೋಡುವೆ,
ನಿನ್ ಪ್ರೀತಿಯ ನೆನೆಸಿ, ನಾ ಸ್ತುತಿಸುವೆ
ಎಂದೆಂದಿಗೂ ನೀನೆ, ಸಿಂಹಾಸನಾಸೀನಾ,
ನನ್ನ ಹೃದಯದಿಂದ, ಆರಾಧಿಸುವೆ,
ಎಂದೆಂದಿಗೂ ನೀನೆ, ಸಿಂಹಾಸನಾಸೀನಾ,
ನನ್ನ ಹೃದಯದಿಂದ, ಆರಾಧಿಸುವೆ,
ರಾಜಾಧೀರಾಜ, ನಿನಗೆ ಅಡ್ಡ ಬೀಳುವೆ,
ಉನ್ನತದಲ್ಲೂ ನಾ, ನಿನ್ನನೇ ಸ್ತುತಿಸುವೆ,
ಎಂದೆಂದಿಗೂ ನೀನೆ, ಸಿಂಹಾಸನಾಸೀನಾ,
ನನ್ನ ಹೃದಯದಿಂದ, ಆರಾಧಿಸುವೆ,
ಎಂದೆಂದಿಗೂ ನೀನೆ
ನನ್ನ ಹೃದಯದಿಂದ, ಆರಾಧಿಸುವೆ,
