ಪ್ರೀತಿಯೇ ಪ್ರೀತಿಯೇ
ಪ್ರೀತಿಯೇ… ಪ್ರೀತಿಯೇ…
ಎಲ್ಲಕ್ಕಿಂತ ಶ್ರೇಷ್ಠ ಪ್ರೀತಿಯೇ
ನಂಬಿಕೆ ನಿರೀಕ್ಷೆ ಉಳಿದರೂ
ಅವುಗಳಲ್ಲಿ ಶ್ರೇಷ್ಠ ಪ್ರೀತಿಯೇ
ಪ್ರೀತಿ ದೀರ್ಘಶಾಂತವುಳ್ಳದು
ಪ್ರೀತಿ ದಯೆಯಿಂದ ತುಂಬಿದೆ
ಅಸೂಯೆ ಇಲ್ಲ ಗರ್ವ ವೂ ಇಲ್ಲ
ಪ್ರೀತಿ ಸದಾ ವಿನಯವೇ
ಪ್ರೀತಿಯೇ… ಪ್ರೀತಿಯೇ…
ಎಲ್ಲಕ್ಕಿಂತಾ ಶ್ರೇಷ್ಠ ಪ್ರೀತಿಯೇ
ಸ್ವಾರ್ಥವನ್ನು ಹುಡುಕುವುದಿಲ್ಲ
ತ್ವರಿತವಾಗಿ ಕೋಪಗೊಳ್ಳದು
ಕೆಟ್ಟದನ್ನು ಲೆಕ್ಕಿಸದೇ
ಸತ್ಯದಲ್ಲಿ ಸಂತೋಷಿಸುತ್ತದೆ
ಪ್ರೀತಿಯೇ… ಪ್ರೀತಿಯೇ…
ಎಲ್ಲಕ್ಕಿಂತ ಶ್ರೇಷ್ಠ ಪ್ರೀತಿಯೇ,
ಪ್ರೀತಿಯೇ ಪ್ರೀತಿಯೇ ಎಲ್ಲಕ್ಕಿಂತಾ
ಮಿಗಿಲಾದುದು.. ಲ ಲ ಲ ಲಲಲ..
ಎಲ್ಲವನ್ನೂ ಸಹಿಸುವ ಪ್ರೀತಿ
ಎಲ್ಲವನ್ನೂ ನಂಬುವ ಪ್ರೀತಿ
ಎಲ್ಲವನ್ನೂ ನಿರೀಕ್ಷಿಸುವ ಪ್ರೀತಿ
ಎಂದಿಗೂ ತಪ್ಪದ ಪ್ರೀತಿ
ನಂಬಿಕೆ… ನಿರೀಕ್ಷೆ… ಪ್ರೀತಿ…
ಅವುಗಳಲ್ಲಿ ಶ್ರೇಷ್ಠವಾದುದು ಪ್ರೀತಿಯೇ.
ಪ್ರೀತಿಯೇ… ಪ್ರೀತಿಯೇ…
ಈ ಭೂಮಿಯಲ್ಲಿ ಎಲ್ಲಕಿಂತ
ಮಿಗಿಲಾದುದು..ಪ್ರೀತಿ
