bupara lokadi ninna bittareಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯ
ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯಾರುಂಟು?,
ಈ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಬಯಕೆ ಏನುಂಟು? ||ಭೂಪರಲೋಕದಿ||
ನೀನೆ ನನ್ನ ಆಸೆ ಅಯ್ಯ, ನಿನ್ನನ್ನೆ ನಾ ಆತುಕೊಂಡೆ ||ಭೂಪರಲೋಕದಿ||
1 ನಿನ್ನೊಂದಿಗೆ ಎಂದೆಂದೂ ನಾ ಬಾಳುವೆ (೨),
ಅಪ್ಪಾ ನನ್ ಬಲಗೈ ಹಿಡಿದು ನಡೆಸುವೆ (೨), ||ನೀನೆ ನನ್ನ||
2 ನಿನ್ ಚಿತ್ತದಂತೆ ನನ್ನನ್ನು ನಡೆಸುವೆ (೨),
ಅಂತ್ಯದಿ ನನ್ನ ನಿನ್ ಮಹಿಮೆಗೆ ಸೇರಿಸುವೆ (೨), ||ನೀನೆ ನನ್ನ||
3 ನನ್ನಾತ್ಮದ ಬಲವೇ ನನ್ ಯೇಸಯ್ಯ (೨),
ನನ್ನಯ ಬಾಳು ಎಂದೆಂದೂ ನೀನೇ ಅಯ್ಯ (೨), ||ನೀನೆ ನನ್ನ||
4 ನಿನ್ನಲ್ಲೆ ನಾ ಆಶ್ರಯ ಹೊಂದಿರುವೆ (೨),
ನಿನ್ನೊಂದಿಗೆ ಬಾಳ್ವದೆ ನನ್ ಭಾಗ್ಯವು (೨), ||ನೀನೆ ನನ್ನ||