• waytochurch.com logo
Song # 9213

ಕರ್ತನು ನೇಮಿಸಿದ ಜಯದ ದಿನವಿದು

kartanu nemisida jayada dinavidu


Show Original KANNADA Lyrics

Translated from KANNADA to TAMIL

ಕರ್ತನು ನೇಮಿಸಿದ ಜಯದ ದಿನವಿದು,
ಇಂದು ಆನಂದಿಸುವ, ಹರ್ಷಿಸುವ, ಹಲೆಲೂಯ ಹಾಡುವ (೨),
ಹಲೆಲೂಯ ಸೋಲಿಲ್ಲ, ಹಲೆಲೂಯ ಜಯವುಂಟು (೨), ||ಕರ್ತನು ನೇಮಿಸಿದ||
ನನ್ನ ರಕ್ಷಕ ಸರ್ವಶಕ್ತನು, ನನ್ನ ಪಕ್ಷ ಇರುವ (೨),
ಲೋಕ ಮನುಷ್ಯರು ನನಗೆ ಎದುರಾಗಿ ಏನೂ ಮಾಡಲಾಗದು (೨),
ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||
ನನ್ನ ಬಲವಾದ, ಕೀರ್ತನೆಯು ಆದ, ನನ್ನ ರಕ್ಷಣೆಯಾದ (೨),
ನೀತಿವಂತರ ಗುಡಾರದಿ ಜಯ ಘೋಷ ಮೊಳಗಲಿ (೨),
ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||
ತಳ್ಳಲ್ಪಟ್ಟ ಕಲ್ಲು , ಕಟ್ಟಡ ಕೆಲಸಕ್ಕೆ ಮೂಲೆಗಲ್ಲಾಯಿತು (೨),
ಕರ್ತನ ಕಾರ್ಯ ಇದು, ಅತಿಶಯ ಇದು, ಕೈ ತಟ್ಟಿ ನಲಿದಾಡುವ (೨),
ಸೋಲು ಇಲ್ಲ ನನಗೆ, ಜಯದ ಹೆಜ್ಜೆ ಇಡುವೆ (೨), ||ಕರ್ತನು ನೇಮಿಸಿದ||


                                
Posted on
  • Song
  • Name :
  • E-mail :
  • Song No

© 2025 Waytochurch.com